ತತ್ವ ಪದಗಳು

ಮೋಹದ ಹೆಂಡತಿ

ಮೋಹದ ಹೆಂಡತಿ ಸತ್ತ ಬಳಿಕ

ಮಾವನ ಮನೆಯ ಹಂಗಿನ್ನ್ಯಾಕೋ

ಸಾವು ನೋವಿಗೆ ತರುವ ಬೀಗನ

ಮಾತಿನ ಹಂಗೊಂದೆನಗ್ಯಾಕೋ ||

ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ

ಬಂಡೆದ್ದು ಹೋಗುವದು ಭಯವ್ಯಾಕೋ

ಮಂಡಲನಾಡಿಗೆ ಪಿಂಡದ ಗೂಡಿಗೆ

ಚಂಡಿತನದಿ ಚರಿಸ್ಯಾಡುವದ್ಯಾಕೋ ||

ತಂದೆ ಗುರುಗೋವಿಂದನ ಸೇವಕ

ಕುಂದಗೋಳಕೆ ಬಂದು ನಿಂತಾನ್ಯಾಕೋ

ಬಂಧುರ ಶಿಶುನಾಳಧೀಶನ ದಯದಿಂದ

ಇಂದಿಗೆ ವಿಷಯದ ವ್ಯಸನಗಳ್ಯಾಕೋ ||

ಹಂಚಿಕೊಳ್ಳಿ:
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು

ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!

ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.